Karnataka Yuva Nidhi Scheme 2023-24 Apply

Karnataka Yuva Nidhi Scheme 2023-24 Apply Online

ನಮಸ್ಕಾರ, ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆ (Yuva Nidhi Scheme) ಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, Yuva Nidhi DBT Status Check ಮಾಡುವ ವಿಧಾನ ಹಾಗೂ ಇತರೆ ಮಾಹಿತಿಯನ್ನು ತಿಳಿಸಲಾಗಿದೆ.

ಎಲ್ಲರಿಗೂ ನಮಸ್ಕಾರ, ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆ (Yuva Nidhi Scheme) ಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳಲ್ಲಿ ಒಂದಾಗಿರುವ ಯುವ ನಿಧಿ ಯೋಜನೆ (Yuva Nidhi) ಯನ್ನು ನಿರುದ್ಯೋಗಿ ಯುವಕರಿಗಾಗಿ ಜಾರಿಗೆ ತರಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.

Karnataka Yuva Nidhi Scheme 2023-24

  • ಯೋಜನೆಯ ಹೆಸರು: ಯುವ ನಿಧಿ ಯೋಜನೆ
  • ನಿರುದ್ಯೋಗ ಭತ್ಯೆ: ಪ್ರತಿ ತಿಂಗಳು 3000 ರೂ. ಮತ್ತು 1500 ರೂ.
  • ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
  • ಅರ್ಜಿ ಸಲ್ಲಿಕೆ ಆರಂಭ: 26-12-2023

ರಾಜ್ಯದ ಪದವೀಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ನಿರುದ್ಯೋಗ ಭತ್ಯೆ ಪಾವತಿಸಲು “ಕರ್ನಾಟಕ ಯುವ ನಿಧಿ ಯೋಜನೆ” ಯನ್ನು ಸರ್ಕಾರ ಜಾರಿ ಮಾಡಿದೆ. ಈ ಯೋಜನೆಯ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಇತರೆ ಮಾಹಿತಿಯನ್ನು ಈ ಕೇಳಗಿನಂತೆ ವಿವರಿಸಲಾಗಿದೆ.

  1. ಏನಿದು ಯುವನಿಧಿ ಯೋಜನೆ: ರಾಜ್ಯದ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಯುವನಿಧಿ’.
  2. ಯುವನಿಧಿ ಯೋಜನೆ ಯಾರಿಗೆ ಸಿಗಲಿದೆ?: 2023 ರಲ್ಲಿ ಪದವಿ/ಡಿಪ್ಲೋಮಾ ಪಾಸಾಗಿ 6 ತಿಂಗಳಾದರೂ ಉದ್ಯೋಗ ಸಿಗದೇ ನಿರುದ್ಯೋಗಿಗಳಾಗಿರುವವರು ಅರ್ಜಿ ಸಲ್ಲಿಸಬಹುದು.

ಯುವನಿಧಿ ಯಾರಿಗೆ ಸಿಗುವುದಿಲ್ಲ?:

  • ಸರ್ಕಾರಿ/ಸರ್ಕಾರಿ ಅನುದಾನಿತ ಸಂಸ್ಥೆ / ಖಾಸಗಿ ವಲಯದಲ್ಲಿ ಉದ್ಯೋಗ ಹೊಂದಿರುವ ಅಭ್ಯರ್ಥಿಗಳು
  • ಸ್ವಯಂ ಉದ್ಯೋಗ ಹೊಂದಿರುವ ಅಭ್ಯರ್ಥಿಗಳು.
  • ವಿದ್ಯಾಭ್ಯಾಸ ಮುಂದುವರೆಸುತ್ತಿರುವ ಅಭ್ಯರ್ಥಿಗಳು

ನಿರುದ್ಯೋಗ ಭತ್ಯೆ ವಿವರ:

ರಾಜ್ಯದಲ್ಲಿ 2023 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ರಂತೆ ನಿರುದ್ಯೋಗ ಭತ್ಯೆಯನ್ನು ಸರ್ಕಾರ ನೀಡುತ್ತದೆ.

2023 ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಸಿಗದ ಪದವೀಧರ ನಿರುದ್ಯೋಗಗಳಿಗೆ (ವೃತ್ತಿಪರ ಕೋರ್ಸ್‌ಗಳು ಸೇರಿದಂತೆ) ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ.

Karnataka Yuva Nidhi Scheme 2023-24 ಷರತ್ತು ಮತ್ತು ನಿಬಂಧನೆಗಳು:

  • ಪದವಿ ಹಾಗೂ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ (Domicile of Karnataka) ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ.
  • ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ, ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ವಗಿತಗೊಳಿಸಲಾಗುವುದು.
  • ಭತ್ಯಯನ್ನು DBT ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
  • ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.

ಹಣ ವರ್ಗಾವಣೆಗೆ ಇವು ಮುಖ್ಯ:

  • ನೇರ ನಗದು ವರ್ಗಾವಣೆ (Direct Benefit Transfer) ಸ್ವೀಕರಿಸಲು ಆಧಾ‌ರ್ ಸಂಖ್ಯೆಯೊಂದಿಗೆ ಸೇರ್ಪಡೆಯಾದ (Aadhar-seeded) ಬ್ಯಾಂಕ್ ಖಾತೆಯನ್ನು ನೀವು ಹೊಂದಿರಬೇಕು. (ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ ಚೆಕ್‌ ಮಾಡಿ)
  • Aadhar-linked mobile number ಅಂದರೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್‌ ನಂಬರ್ ಅನ್ನು ನೀಡಬೇಕು.

Documents For Yuva Nidhi Scheme:

ಆನ್‌ಲೈನ್‌ನಲ್ಲಿ ಮಾಹಿತಿ ಲಿಂಕ್ ಆಗದೆ ಇದ್ದಲ್ಲಿ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ,
  • ಪಿಯುಸಿ ಅಂಕಪಟ್ಟಿ
  • ಪದವಿ ಪ್ರಮಾಣ ಪತ್ರ/ಅಂಕಪಟ್ಟಿಗಳು
  • ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ
  • ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹತೆ ಪರಿಶೀಲನೆಗಾಗಿ ‘ಸೇವಾ ಸಿಂಧು’ ಪೋರ್ಟಲ್ ನಲ್ಲಿ ಅಭ್ಯರ್ಥಿಗಳು ತಮ್ಮ ಪದವಿ/ ಡಿಪ್ಲೋಮಾ ನೋಂದಣಿ ಸಂಖ್ಯೆಯನ್ನು (ಐ.ಡಿ) ದಾಖಲಿಸಬೇಕಾಗಿರುತ್ತದೆ.

Yuva Nidhi Scheme ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:

Yuva Nidhi DBT Status Check ಮಾಡುವುದು ಹೇಗೆ..?

‘ಯುವನಿಧಿ’ ಯೋಜನೆಯ DBT Status Check ಮಾಡುವ ವಿಧಾನ ಮತ್ತು ಲಿಂಕ್‌ಅನ್ನು ಶೀಘ್ರದಲ್ಲೇ ನಿಮಗೆ ನೀಡಲಾಗುತ್ತದೆ. ನೀವು ದಯವಿಟ್ಟು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.

ಯುವನಿಧಿ ಯೋಜನೆ ಹಣ ವರ್ಗಾವಣೆ ಯಾವಾಗ..?

‘ಸ್ವಾಮಿ ವಿವೇಕಾನಂದ ಜಯಂತಿ‌’ ದಿನವಾದ 12-01-2024 ರಂದು ‘ಯುವನಿಧಿ’ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (Yuva Nidhi Scheme DBT) ಮಾಡಲಿದ್ದಾರೆ. ‘ಯುವನಿಧಿ’ ಯೋಜನೆಯ ಹಣ ವರ್ಗಾವಣೆ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಜರುಗಲಿದೆ.

Yuva Nidhi DBT Status

YuvaNidhi Karnataka ಪ್ರಮುಖ ಲಿಂಕ್‌ಗಳು:

Yuva Nidhi Scheme Application LinkApply Online
Yuva Nidhi Scheme Official Websitesevasindhugs.karnataka.gov.in,
sevasindhuservices.karnataka.gov.in

Yuva Nidhi Scheme FAQs

ಯುವನಿಧಿ ಯೋಜನೆ ಎಂದರೇನು?

ಕರ್ನಾಟಕ ರಾಜ್ಯ ಸರ್ಕಾರವು ಪದವಿ ಹಾಗೂ ಡಿಪ್ಲೋಮಾ ಕೋರ್ಸ್‌ಗಳನ್ನು 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾದ ಕರ್ನಾಟಕ ರಹವಾಸಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಖಾತರಿ ಯೋಜನೆಯಾಗಿರುತ್ತದೆ. ಪದವೀದಧರರಿಗೆ ರೂ. 3000/- ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1500/- ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ನೀಡಲಾಗುವುದು.

ಯುವನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣದಲ್ಲಿ ಅರ್ಜಿ ಸಲ್ಲಿಸುವುದು. https://sevasindhugs.karnataka.gov.in/

ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಅರ್ಹತೆಗಳೇನು?

ಪದವಿ/ಡಿಪ್ಲೋಮಾ ಗಳನ್ನು 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡಿರಬೇಕು ಹಾಗೂ 2023ರಲ್ಲಿ ತೇರ್ಗಡೆಯಾಗಿದ್ದು 180 ದಿವಸಗಳವರೆಗೆ ನಿರುದ್ಯೋಗಿಗಳಾಗಿ ಅಭ್ಯರ್ಥಿಗಳು ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಾಗಿರಬೇಕು.

ಯುವನಿಧಿ ಯೋಜನೆಗೆ ಯಾರು ಅನರ್ಹರು?

ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು ಸ್ವ-ಉದ್ಯೋಗಿಗಳು, ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಲ್ಲದವರು ಮತ್ತು ಪದವಿ/ಡಿಪ್ಲೋಮಾ ಕೋರ್ಸ್‌ನ್ನು ಕರ್ನಾಟಕ ಹೊರತಾಗಿ ಬೇರೆ ರಾಜ್ಯದಲ್ಲಿ ವ್ಯಾಸಂಗ ಮಾಡಿದವರು, ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವವರು ಅನರ್ಹರು.

ಯುವನಿಧಿ ಯೋಜನೆಗೆ ಕರ್ನಾಟಕದ ರಹವಾಸಿ ಎಂದರೆ ಯಾರು?

ಕರ್ನಾಟಕದ ರಹವಾಸಿ ಎಂದರೆ ಕರ್ನಾಟಕದಲ್ಲಿ ಪದವಿ/ಡಿಪ್ಲೋಮಾ ವ್ಯಾಸಂಗದವರೆಗೆ ಕನಿಷ್ಠ 6 ವರ್ಷ ವಾಸವಿರಬೇಕು.

ಕರ್ನಾಟಕದ ರಹವಾಸಿ ಎಂದು ಹೇಗೆ ಪರಿಶೀಲಿಸಲಾಗುವುದು?

ಕರ್ನಾಟಕದಲ್ಲಿ 6 ವರ್ಷಗಳ “ವಾಸವಿರುವ ವಿದ್ಯಾರ್ಥಿ ಎಂದು ಈ ಕೆಳಗಿನಂತೆ ಪರಿಶೀಲಿಸಲಾಗುತ್ತದೆ:
1. ಎಸ್‌ಎಸ್ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ / ಅಂಕಪಟ್ಟಿಗಳು ಅಥವಾ
2. ಎಸ್‌ಎಸ್ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಡಿಪ್ಲೋಮಾ
3. ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಅಥವಾ 3. ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ
ಪ್ರಮಾಣ ಪತ್ರ ಅಥವಾ
4. ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ.

KeyWords: Yuva Nidhi Scheme Apply Online, Yuva Nidhi DBT Status Check, YuvaNidhi Amount, YuvaNidhi Payment Status, YuvaNidhi Eligibility, YuvaNidhi Scheme Application, YuvaNidhi Scheme When Will Start, YuvaNidhi Scheme Congress